A foundation for life…

08255 281055mdmmelkar2012@gmail.com
Melkar Women's College logo

UUCMS ಸಂಯೋಜನಾ ವಿಸ್ತರಣೆ ಮತ್ತು AICTE ಅನುಮೋದನೆ - ಶೈಕ್ಷಣಿಕ ವರ್ಷ 2026-27

21 Apr 2026

UUCMS ಸಂಯೋಜನಾ ವಿಸ್ತರಣೆ ಮತ್ತು AICTE ಅನುಮೋದನೆ - ಶೈಕ್ಷಣಿಕ ವರ್ಷ 2026-27

ಮಾನ್ಯರೇ,

ಶೈಕ್ಷಣಿಕ ವರ್ಷ 2026-27 ನೇ ಸಾಲಿನ ಸಂಯೋಜನೆಗೆ ಸಂಬಂಧಿಸಿದಂತೆ “ಕಾಲೇಜುಗಳು ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗಾಗಿ ಈಗಾಗಲೇ UUCMS ಮೂಲಕ ಅರ್ಜಿ ಸಲ್ಲಿಸಿದ್ದು ಅವು ವಿಶ್ವವಿದ್ಯಾಲಯದ ಮಟ್ಟದಲ್ಲಿ ಬಾಕಿಯಿದ್ದಲ್ಲಿ ಅಂತಹ ಪ್ರಸ್ತಾವನೆಗಳನ್ನು ಮಾತ್ರ ಸರ್ಕಾರಕ್ಕೆ ಸಲ್ಲಿಸಲು ಹಾಗೂ ಸದರಿ ಪ್ರಸ್ತಾವನೆಗಳನ್ನು ಸರ್ಕಾರದ ಮಟ್ಟದಲ್ಲಿ ಅನುಮೋದಿಸಲು/ತಿರಸ್ಕರಿಸಲು ದಿನಾಂಕ 30.04.2026ರವರೆಗೆ ಸಂಯೋಜನಾ ಅವಧಿಯನ್ನು ವಿಸ್ತರಿಸಲಾಗಿದೆ” ಎಂಬುದಾಗಿ ಸರಕಾರ ಪತ್ರ ಸಂಖ್ಯೆ ಇಡಿ 212 ಯುಎನ್ಇ 2024 ದಿನಾಂಕ 21.04.2026ರಲ್ಲಿ ತಿಳಿಸಲಾಗಿದೆ.

ಶೈಕ್ಷಣಿಕ ವರ್ಷ 2026-27ನೇ ಸಾಲಿಗೆ BCA, BBA, MBA, MCA ಕಾರ್ಯಕ್ರಮಗಳಿಗೆ AICTE ಅನುಮೋದನೆ ಪಡೆದಿರುವ ಬಗ್ಗೆ AICTE ಯ EOA ಪ್ರತಿಯನ್ನು ಸಲ್ಲಿಸಲು ತಿಳಿಸಿದ್ದು, ಕೆಲವೊಂದು ಕಾಲೇಜಿನವರು ಸಲ್ಲಿಸಿರುವುದು ಕಂಡುಬಂದಿಲ್ಲ. ಸರ್ಕಾರದ ಪತ್ರದ ನಿರ್ದೇಶನದಂತೆ ಅನುಮೋದನೆ ಪಡೆಯಲು ಬಾಕಿ ಇರುವ ಕಾಲೇಜಿಗಳು ದಿನಾಂಕ 30.04.2026ರ ಒಳಗೆ AICTE ಅನುಮೋದನೆ ಪತ್ರವನ್ನು ಸಲ್ಲಿಸುವಂತೆ ತಿಳಿಸಲಾಗಿದೆ.

AICTE ಅನುಮೋದನೆಯಿಲ್ಲದೆ ಶೈಕ್ಷಣಿಕ ವರ್ಷ 2026-27ನೇ ಸಾಲಿಗೆ BCA, BBA, MBA, MCA ಕಾರ್ಯಕ್ರಮಗಳಿಗೆ ವಿದ್ಯಾರ್ಥಿ ಪ್ರವೇಶಾತಿ ಮಾಡಲು ಅವಕಾಶವಿರುವುದಿಲ್ಲ ಎಂಬುದಾಗಿ ಈ ಮೂಲಕ ತಿಳಿಸಲಾಗಿದೆ.

ಗಮನಿಸಿ: AICTE ಅನುಮೋದನೆಯ ಮಾಹಿತಿಯನ್ನು ಕೆಳಗೆ ನೀಡಿರುವ Google Form ನಲ್ಲಿ ಭರ್ತಿ ಮಾಡಿ ಕಳುಹಿಸುವಂತೆ ಈ ಮೂಲಕ ತಿಳಿಸಲಾಗಿದೆ.

ಧನ್ಯವಾದಗಳೊಂದಿಗೆ,

ನಿರ್ದೇಶಕರು, ಕಾಲೇಜು ಅಭಿವೃದ್ಧಿ ಮಂಡಳಿ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ — ದೂರವಾಣಿ ಸಂ: 0824-2287368